ಅಕ್ರಮ ಕಟ್ಟಡಗಳ ತೆರವು, ರಸ್ತೆಗಳೆಲ್ಲವೂ ಸ್ವಚ್ಛಒಂದು ಕಾಲದಲ್ಲಿ ಐತಿಹಾಸಿಕ ಚರಿತ್ರೆಯನ್ನೇ ಬರೆದಿರುವ ಬಿಜಾಪುರದ ಹೆಸರು ವಿಜಯಪುರವಾಗಿ ಬದಲಾಗಿದೆ. ಆದರೆ, ಇಂದಿಗೂ ಕೂಡ ಅದೇ ಹಳೆಯ ಇಕ್ಕಟ್ಟಾದ ರಸ್ತೆಗಳು, ಗಿಜಗುಡುವ ವಾಹನಗಳ ಸಂಚಾರ ದಟ್ಟಣೆಯಿಂದ ಹೊರಬಂದಿರಲಿಲ್ಲ. ಆದರೆ, ಆದಿಲ್ ಶಾಹಿಗಳ ನಾಡು, ಪಂಚ ನದಿಗಳ ಬೀಡು ಇದೀಗ ಹೊಸತನದ ರೂಪವನ್ನು ಕಂಡುಕೊಳ್ಳುತ್ತಿದೆ. ಜಿಲ್ಲೆಯ ಹೆಸರು ಬದಲಾಗುವುದರೊಂದಿಗೆ ಹೊಸತನದ ರೂಪುರೇಷೆ ಪಡೆಯುತ್ತಿದ್ದು, ನಗರದ ಚಿತ್ರಣವೂ ಬದಲಾಗುತ್ತಿದೆ.