ರೈತರಿಗೆ ಆಸೆ ತೋರಿಸಿ ಕೈಕೊಟ್ಟ ಮಳೆರಾಯಕನ್ನಡಪ್ರಭ ವಾರ್ತೆ ಇಂಡಿ ಬೀಸುವ ಗಾಳಿ, ಓಡುವ ಮೋಡ, ನೆಲಕ್ಕೆ ಬೀಳುವ ತುಂತುರು ಮಳೆ ಹನಿ ಇವೆಲ್ಲವನ್ನು ನೋಡಿ ರೈತರು ಕಂಗಾಲಾಗಿದ್ದಾರೆ. ಸುರಿಯಬೇಕಿದ್ದ ಮಳೆ ಕೈ ಕೊಡುತ್ತಿದ್ದು, ಕೈಗೆ ಬರಬೇಕಿದ್ದ ಬೆಳೆಗಳು ಎಲ್ಲಿ ಒಣಗಿ ಹೋಗುತ್ತವೆಯೋ ಎಂಬ ಆತಂಕದಲ್ಲಿಯೇ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರದಾಟ ನಡೆಸಿದ್ದಾರೆ ರೈತರು. ಅಲ್ಲದೇ, ಮಳೆ ಯಾವಾಗ ಬರುತ್ತೋ ಅಂತ ಕಾಯ್ದು ಕುಳಿತಿದ್ದಾರೆ.