ಕತ್ತಲೆ ಬಡಾವಣೆಯಲ್ಲಿ ಬೆಳಕು ಹರಿಸದ ಪಾಲಿಕೆ!ನಗರದ 14ನೇ ವಾರ್ಡ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರಾತ್ರಿಯಾದರೆ ಸಾಕು ಜನ ಆತಂಕಕ್ಕೆ ಒಳಗಾಗುತ್ತಾರೆ. ಕಾರಣವೆಂದರೆ ರಸ್ತೆಗಳ ಮೇಲೆ ಸರಿಯಾದ ಬೀದಿ ದೀಪಗಳು ಇಲ್ಲದಿರುವುದು. ಇಲ್ಲಿನ ಶಿಕಾರಖಾನೆ, ಅಂಬೇಡ್ಕರ್ ನಗರ, ಗಣೇಶ ನಗರ, ಮುಕುಂದ ನಗರಗಳಲ್ಲಿ ಸಂಜೆಯಾದರೇ ಸಾಕು ಕತ್ತಲು ಆವರಿಸುತ್ತದೆ. ಹೀಗಾಗಿ ಸಂಪೂರ್ಣ ಬಡಾವಣೆಗಳೆ ಹಲವು ವರ್ಷಗಳಿಂದ ಕಗ್ಗತ್ತಲಲ್ಲಿವೆ. ಮಹಾನಗರ ಪಾಲಿಕೆಯ 14ನೇ ವಾರ್ಡ್‌ನಲ್ಲಿರುವ ಅನಂತಲಕ್ಷ್ಮಿ ಮ್ಯಾರೆಜ್ ಹಾಲ್ ರಸ್ತೆ, ಚೌಧರಿ ಆಸ್ಪತ್ರೆ ರಸ್ತೆ, ಪಶು ವೈದ್ಯಕೀಯ ಆಸ್ಪತ್ರೆ ರಸ್ತೆಯ ಕಂಬಗಳಿಗೆ ಸುಮಾರು ವರ್ಷಗಳಿಂದ ಲೈಟ್‌ಗಳೇ ಇಲ್ಲ.