ಚಾಣಕ್ಯ ಪದವಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವಭಾರತದ ಗಡಿಯಲ್ಲಿ ನಮ್ಮ ಸೈನಿಕರು ಶತ್ರುಗಳಿಗೆ ಎದೆಯೊಡ್ಡಿ ದೇಶದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ನಮ್ಮನೆಲ್ಲರನ್ನು ರಕ್ಷಿಸುತ್ತಾರೆ. ಇಂತಹ ರಕ್ಷಣಾ ಪಡೆಗಳು ಹಗಲಿರುಳು ಎನ್ನದೆ, ಮಳೆ, ಬಿಸಿಲು ಎನ್ನದೆ ದೇಶ ಕಾಯುತ್ತಿರುವುದರಿಂದ ನಾವೆಲ್ಲರೂ ಸದಾ ಶಾಂತ ಮತ್ತು ಸುವ್ಯವಸ್ಥಿತ ಜೀವನವನ್ನು ನಿರ್ವಹಿಸಲು ಸಾಧ್ಯವಾಗಿದೆ ಎಂದು ಪ್ರಾಚಾರ್ಯ ಡಾ.ಎಸ್.ಟಿ.ಮೇರವಾಡೆ ಹೇಳಿದರು.