ಚುನಾವಣೆ ಪ್ರಚಾರದಲ್ಲಿ ಗಂಭೀರ ವಿಷಯ ಚರ್ಚೆಯಾಗಬೇಕುಕನ್ನಡಪ್ರಭ ವಾರ್ತೆ ವಿಜಯಪುರ: ಈ 18ನೇ ಲೋಕಸಭಾ ಚುನಾವಣೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ, ಚುನಾವಣಾ ಬಾಂಡ್ ಮೂಲಕ ಕಂಪನಿಗಳಿಂದ ವ್ಯವಸ್ಥಿತ ದರೋಡೆ, ಸೈಬರ್ ಕ್ರೈಂ, ಮಹಿಳೆಯರ ಮೇಲೆ ದೌರ್ಜನ್ಯ ಮುಂತಾದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ಆಗಬೇಕಾಗಿತ್ತು ಎಂದು ಎಸ್‌ಯುಸಿಐ(ಸಿ) ರಾಜ್ಯ ಸೆಕ್ರೆಟ್ರೇಟ್ ಸದಸ್ಯ ಟಿ.ಎಸ್.ಸುನೀತಕುಮಾರ್ ಹೇಳಿದರು. ನಗರದಲ್ಲಿರುವ ಎಸ್‌ಯುಸಿಐ(ಸಿ) ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಕುರಿತು ಮತ ಹಾಕುವ ಮುನ್ನ ನಿರ್ಧರಿಸು ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.