ದೇವರಹಿಪ್ಪರಗಿ ತಾಲೂಕಿನಾದ್ಯಂತ ಶ್ರೀರಾಮ ಉತ್ಸವದೇವರಹಿಪ್ಪರಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿತ್ತು. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಾಗೂ ರಾಮಮಂದಿರ ಉದ್ಘಾಟನೆ ಅದ್ಧೂರಿಯಾಗಿ ನಡೆಯುತ್ತಿದ್ದರೇ ಇತ್ತ ದೇವರಹಿಪ್ಪರಗಿ ಪಟ್ಟಣದ ಪುರಾತನ ಹನುಮಾನ್ ಮಂದಿರದಲ್ಲಿ ಬೆಳಗ್ಗೆಯಿಂದಲೇ ಪಟ್ಟಣದ ಪ್ರಮುಖರು ಆರ್‌ಎಸ್‌ಎಸ್ ಹಾಗೂ ವಿಎಚ್‌ಪಿ ತಾಲೂಕು ಘಟಕದಿಂದ ಪೂಜೆ, ಅಭಿಷೇಕ, ಭಜನೆ ಹಾಗೂ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.