ಸಕಲ ಸರ್ಕಾರಿ ಗೌರವಗಳೊಂದಿಗೆ ನಾಗನಗೌಡ ಅಂತ್ಯಕ್ರಿಯೆಭಾನುವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದ, ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕ, ಹಿರಿಯ ರಾಜಕೀಯ ಮುತ್ಸದ್ದಿ ನಾಗನಗೌಡ ಕಂದಕೂರು (78) ಅವರ ಅಂತ್ಯಕ್ರಿಯೆಯು ಸಾವಿರಾರು ಅಭಿಮಾನಿಗಳು ಕಣ್ಣೀರ ವಿದಾಯದೊಂದಿಗೆ, ಸಕಲ ಸರ್ಕಾರಿ ಗೌರವಗಳ ಮೂಲಕ ಸ್ವಗ್ರಾಮ ಕಂದಕೂರಿನ ಅವರ ಜಮೀನಿನಲ್ಲಿ ಸೋಮವಾರ ಮಧ್ಯಾಹ್ನ ಜರುಗಿತು.