ಶಹಾಪುರಕ್ಕಿಂದು ಬಿ.ವೈ.ವಿಜಯೇಂದ್ರ: ಕೇಸರಿ ಪಡೆಯಲ್ಲಿ ಉತ್ಸಾಹಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಹಾಪುರ ನಗರಕ್ಕೆ ಮೊದಲ ಬಾರಿಗೆ ಆಗಮಿಸುತ್ತಿರುವ ಹಿನ್ನೆಲೆ ಅವರನ್ನು ಸ್ವಾಗತಿಸಲು ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ನಿಮಿತ್ತ ಭರ್ಜರಿ ಸಿದ್ಧತೆ ನಡೆದಿರುವುದು. ಶಹಾಪುರ ನಗರದಲ್ಲಿ ಬಿಜೆಪಿ ಭಾನುವಾರ ಪಕ್ಷದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಸ್ತೆಯುದ್ಧಕ್ಕೂ ಕೇಸರಿ ಧ್ವಜಗಳು, ಬ್ಯಾನರ್ ಗಳು ರಾರಾಜಿಸುತ್ತಿರುವದು.