ನೀರು, ಚರಂಡಿ, ರಸ್ತೆ ಅಂದವಾಗಿಡಲು ಯೋಜನೆ ರೂಪಿಸಲು ಸಲಹೆಪಟ್ಟಣದ ನಿವಾಸಿಗಳಿಗೆ ಕುಡಿಯಲು ಶುದ್ಧ ನೀರು ಪೂರೈಕೆ, ಚರಂಡಿಗಳ ಸ್ವಚ್ಛತೆ ಹಾಗೂ ರಸ್ತೆಗಳಲ್ಲಿ ಉಂಟಾಗಿರುವ ಕಂದಕಗಳನ್ನು ಸರಿಪಡಿಸುವ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಉದ್ಯಾನಗಳ ಸಮರ್ಪಕ ನಿರ್ವಹಣೆ ಒಟ್ಟಾರೆ ಪಟ್ಟಣದ ಅಂದವಾಗಿಸುವ ಕಾಮಗಾರಿಯ ಕ್ರಿಯಾಯೋಜನೆ ರೂಪಿಸಬೇಕು ಎಂದು ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಿದರು.