ವಿಡಿಯೋದಲ್ಲಿ ಇದ್ದ ವಿವೇಕಾನಂದ ಬಿಇಒ, ವರ್ಗಾವಣೆ ಆಗಿದ್ದು ಇನ್ಸ್ಪೆಕ್ಟರ್: ಸಿದ್ದುರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿರುವ ಪುತ್ರ ಡಾ.ಯತೀಂದ್ರನ ವಿಡಿಯೋದಲ್ಲಿ ಪ್ರಸ್ತಾಪವಾಗಿರುವ ''ವಿವೇಕಾನಂದ'' ಹೆಸರಿನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ. ''ಆ ವಿವೇಕಾನಂದನೇ ಬೇರೆ, ಈ ವಿವೇಕಾನಂದನೇ ಬೇರೆ. ಅವರು ಬಿಇಒ, ಇವರು ಇನ್ಸ್ಪೆಕ್ಟರ್'' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.