5 ಬಾರಿ ಚಾಂಪಿಯನ್ ಎಂಬ ಖ್ಯಾತಿಯೊಂದಿಗೆ 18ನೇ ಆವೃತ್ತಿ ಐಪಿಎಲ್ಗೆ ಕಾಲಿಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ನ ಅಭಿಯಾನ ಲೀಗ್ ಹಂತದಲ್ಲೇ ಕೊನೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಎಂ.ಎಸ್.ಧೋನಿ ನಾಯಕತ್ವದ ಸಿಎಸ್ಕೆ ಈ ಸಲ ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳ ಪೈಕಿ 7ರಲ್ಲಿ ಎದುರಾಳಿಗೆ ಶರಣಾಗಿದೆ.
ತವರಿನಲ್ಲಿ ಜಯದ ಸಿಹಿ ಸವಿಯಲು ಹಪಹಪಿಸುತ್ತಿರುವ ಆರ್ಸಿಬಿ, ಗುರುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದೆ.
ಮೇ 24ರಂದು ನಿಗದಿಯಾಗಿರುವ ಎನ್ಸಿ ಕ್ಲ್ಯಾಸಿಕ್ ಜಾವೆಲಿನ್ ಥ್ರೋ ಕೂಟ ಪಂಚಕುಲಾದಿಂದ ಬೆಂಗಳೂರಿಗೆ ಸ್ಥಳಾಂತರ: ನೀರಜ್ ಚೋಪ್ರಾ.
ಇದೇ ಮೊದಲ ಬಾರಿಗೆ ಭಾರತದಲ್ಲಿ ವಿಶ್ವ ಶ್ರೇಷ್ಠ ಜಾವೆಲಿನ್ ಎಸೆತಗಾರರ ನಡುವೆ ಸ್ಪರ್ಧೆ.
ಜೋಸ್ ಬಟ್ಲರ್ ಸ್ಫೋಟಕ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 7 ವಿಕೆಟ್ ಜಯಗಳಿಸಿದೆ. ಇದರೊಂದಿಗೆ ತಂಡ ಅಂಕಪಟ್ಟಿಯಲ್ಲಿ 5ನೇ ಜಯದೊಂದಿಗೆ ಅಗ್ರಸ್ಥಾನಕ್ಕೇರಿದೆ. 7 ಪಂದ್ಯಗಳಲ್ಲಿ 2ನೇ ಸೋಲುಂಡ ಡೆಲ್ಲಿ 2ನೇ ಸ್ಥಾನಕ್ಕೆ ಕುಸಿಯಿತು.
ಆರ್ಸಿಬಿ ಈ ವರ್ಷ ತವರಿನಲ್ಲಿ ಮೊದಲ ಜಯಕ್ಕಾಗಿ ಮತ್ತಷ್ಟು ದಿನ ಕಾಯಬೇಕಿದೆ. ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ಮಳೆ ಬಾಧಿತ ಪಂದ್ಯದಲ್ಲಿ, ಆರ್ಸಿಬಿಗೆ 5 ವಿಕೆಟ್ ಸೋಲು ಎದುರಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ 3ನೇ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಕಂಡ ಆರ್ಸಿಬಿ, 3ನೇ ಸೋಲುಂಡಿತು.