ಟಿ20 ತಂಡಕ್ಕೆ ರೋಹಿತ್, ಕೊಹ್ಲಿ ವಾಪಸ್!ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. 13 ತಿಂಗಳ ಬಳಿಕ ಟಿ20 ತಂಡಕ್ಕೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಾಪಸ್ ಆಗಿದ್ದು, ಟಿ20 ವಿಶ್ವಕಪ್ಗೂ ದಿಗ್ಗಜ ಆಟಗಾರರಿಬ್ಬರ ಆಯ್ಕೆ ಖಚಿತ ಎನ್ನುವ ಸುಳಿವು ನೀಡಿದೆ ಬಿಸಿಸಿಐ. ಕನ್ನಡಿಗ ಕೆ.ಎಲ್.ರಾಹುಲ್ಗೆ ತಂಡದಲ್ಲಿ ಜಾಗ ಸಿಕ್ಕಿಲ್ಲ. ಬೂಮ್ರಾ, ಸಿರಾಜ್, ಶ್ರೇಯಸ್, ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ಜ.11ರಿಂದ ಆರಂಭಗೊಳ್ಳಲಿದ್ದು, ಜ.17ಕ್ಕೆ ಬೆಂಗಳೂರಲ್ಲಿ 3ನೇ ಪಂದ್ಯ ನಡೆಯಲಿದೆ.