ಸತತ 2 ಗೆಲುವಿನೊಂದಿಗೆ ಈ ಬಾರಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದರೂ ಬಳಿಕ ತನ್ನದೇ ತವರಿನಲ್ಲಿ ಎದುರಾದ ಸೋಲು ಆರ್ಸಿಬಿಯನ್ನು ಕುಗ್ಗಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ನ ಎದುರಿಸಲಿರುವ ಆರ್ಸಿಬಿ, ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ.
: ಐಪಿಎಲ್ನಿಂದ ನಿವೃತ್ತಿಯಾಗುವ ಬಗ್ಗೆ ಭಾರತದ ದಿಗ್ಗಜ ಕ್ರಿಕೆಟಿಗ ಎಂ.ಎಸ್.ಧೋನಿ ಮೌನ ಮುರಿದಿದ್ದಾರೆ. ನಿವೃತ್ತಿಯ ಬಗ್ಗೆ ನಾನಲ್ಲ, ನನ್ನ ದೇಹ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ರನ್ ಹೊಳೆ ಹರಿದ ಶುಕ್ರವಾರದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 12 ರನ್ ವೀರೋಚಿತ ಸೋಲನುಭವಿಸಿದೆ. ಬೌಲಿಂಗ್ ಬಳಿಕ ಬ್ಯಾಟಿಂಗ್ನಲ್ಲೂ ಫೇಲಾದ ಮುಂಬೈ ಟೂರ್ನಿಯಲ್ಲಿ 3ನೇ ಸೋಲುಂಡಿತು. ರಿಷಭ್ ಪಂತ್ ನಾಯಕತ್ವದ ಲಖನೌ 4 ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿತು.
ಈ ಬಾರಿ ಐಪಿಎಲ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಶುಕ್ರವಾರ ಪರಸ್ಪರ ಮುಖಾಮುಖಿಯಾಗಲಿವೆ.