13ನೇ ಆವೃತ್ತಿಯ ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ಗೆ ಮಂಗಳವಾರ ಚಾಲನೆ ಸಿಗಲಿದೆ. ಭಾರತ ಹಾಗೂ ಶ್ರೀಲಂಕಾ ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಈ ಎರಡು ತಂಡಗಳೇ ಉದ್ಘಾಟನಾ ಪಂದ್ಯದಲ್ಲಿಂದು ಪರಸ್ಪರ ಸೆಣಸಾಡಲಿವೆ.
ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದೆವು. ಇದು ಎಲ್ಲಕ್ಕಿಂತ ಮುಖ್ಯ. ಕೊನೆಯಲ್ಲಿ ನಮಗೆ ಟ್ರೋಫಿ ಸಿಗಲಿಲ್ಲ, ಟ್ರೋಫಿ ಕೊಡಲಿಲ್ಲ. ಇದನ್ನೆಲ್ಲಾ ಪಕ್ಕಕ್ಕಿಡೋಣ. ನಮ್ಮ ಗೆಲುವಿನಿಂದ ಇಡೀ ದೇಶ ಸಂಭ್ರಮಿಸುತ್ತಿದೆ. ನಾವು ಏಷ್ಯಾ ಚಾಂಪಿಯನ್ ಆಗಿದ್ದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ.
ಏಷ್ಯಾಕಪ್ ಫೈನಲ್ ಪಂದ್ಯ ರೋಚಕವಾಗಿ ಮುಕ್ತಾಯಗೊಂಡ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭ ಭಾರೀ ಹೈಡ್ರಾಮಾದೊಂದಿಗೆ ಕೂಡಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿತು.
ಪಾಕಿಸ್ತಾನ ಬಗ್ಗುಬಡಿದು ಏಷ್ಯಾಕಪ್ ಟ್ರೋಫಿ ಗೆದ್ದ ಭಾರತ, ವಿಕೆಟ್ ಪತನ, ಅಂತಿಮ ಹಂತದಲ್ಲಿ ಎದುರಾದ ಸವಾಲು , ಪಾಕ್ ವಿರುದ್ದದ ಪಂದ್ಯದ ಒತ್ತಡಗಳಿಂದ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿತ್ತು. ಯಾರಿಗೆ ಗೆಲುವು ಅನ್ನೋದು ನಿಗೂಢವಾಗಿತ್ತು. ಆದರೆ ತಿಲಕ್ ವರ್ಮಾ ಹೋರಾಟ ಗೆಲುವು ತಂದುಕೊಟ್ಟಿದೆ.
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಮೊದಲ ದಿನವೇ ಭಾರತ ಮೂರು ಪದಕಗಳನ್ನು ಗೆದ್ದಿದೆ. ಪುರುಷರ ಹೈಜಂಪ್ನ ಟಿ63 ವಿಭಾಗ (ಕಾಲಿನ ದೌರ್ಬಲ್ಯ)ದಲ್ಲಿ ಶೈಲೇಶ್ ಕುಮಾರ್ 1.91 ಮೀ. ಎತ್ತರಕ್ಕೆ ಜಿಗಿದು ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು.
ವಿಶ್ವ ಪ್ಯಾರಾ ಅರ್ಚರಿ ಚಾಂಪಿಯನ್ಶಿಪ್ನಲ್ಲಿ ಭಾರತದ 18 ವರ್ಷದ ಶೀತಲ್ ದೇವಿ ಇತಿಹಾಸ ಬರೆದಿದ್ದಾರೆ. ಕೈಗಳಿಲ್ಲದ ಮಹಿಳೆಯೊಬ್ಬರು ವಿಶ್ವ ಚಾಂಪಿಯನ್ ಆಗಿದ್ದು ಇದೇ ಮೊದಲು. ಮತ್ತೊಂದೆಡೆ ವೈಯಕ್ತಿಕ ವಿಭಾಗದಲ್ಲಿ ತೋಮನ್ ಕುಮಾರ್ರ ಸ್ವರ್ಣ ಸೇರಿ ಭಾರತ ಕೂಟದಲ್ಲಿ 5 ಪದಕ ಜಯಿಸಿದೆ.
ಅನೌಪಚಾರಿಕ ಎನಿಸಿದ್ದ ಭಾರತ ಹಾಗೂ ಶ್ರೀಲಂಕಾ ನಡುವಿನ ಏಷ್ಯಾಕಪ್ ಸೂಪರ್-4 ಪಂದ್ಯ ರೋಚಕವಾಗಿ ಅಂತ್ಯಗೊಂಡಿತು. ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಪಂದ್ಯವೊಂದು ದೊಡ್ಡ ಮೊತ್ತಕ್ಕೆ ಸಾಕ್ಷಿಯಾಯಿತು.