ಕಲಾವಿದ ರವೀಂದ್ರಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಒತ್ತಾಯ

Oct 14 2025, 01:00 AM IST
ಧರ್ಮಸ್ಥಳ ಮಾದರಿಯಲ್ಲಿ ಗಣಪತಿ ಆಸ್ಥಾನ ಮಂಟಪವನ್ನು ಸಿದ್ಧ ಪಡಿಸಿರುವ ಕಲಾವಿದ ಸಿ. ಎಂ. ರವೀಂದ್ರರವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವಂತೆ ಒತ್ತಾಯ ಮಾಡಿದ ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕಾಳೇನಹಳ್ಳಿ ಆನಂದ ಕುಮಾರ್ ಸರ್ಕಾರಕ್ಕೆ ಒತ್ತಾಯ ಮಾಡಿದರು. ಪಟ್ಟಣದ ಹಿರಿಯ ಕಲಾವಿದರಾದ ಸಿ ಎಂ ರವೀಂದ್ರರ ಕೈಚಳಕದಿಂದ ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪವನ್ನು ಧರ್ಮಸ್ಥಳ ಮಾದರಿಯಲ್ಲಿ ಗಣೇಶನನ್ನು ಅಲಂಕಾರ ಮಾಡಿರುವುದು ಸಾರ್ವಜನಿಕರಿಂದ ತುಂಬಾ ಪ್ರಶಂಸೆಗೆ ಕಾರಣವಾಗಿದೆ.ಇಂತಹ ನುರಿತ ಕಲಾವಿದರನ್ನು ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯ ಮಾಡಿದರು.

ಮೊಗಳ್ಳಿ ಗಣೇಶ್‌ಗೆ ಮರಣೋತ್ತರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ

Oct 12 2025, 01:00 AM IST
ಡಾ.ಮೊಗಳ್ಳಿ ಗಣೇಶ್ ಅವರು ಅಕ್ಷರವನ್ನೇ ತಮ್ಮ ಅಸ್ತ್ರವಾಗಿಸಿಕೊಂಡು ಕಥೆ, ಕಾದಂಬರಿ, ಪ್ರಬಂಧ, ಸಂಶೋಧನ ಕೃತಿ, ಬೀದಿನಾಟಕ, ಕಾವ್ಯ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿ ಪ್ರಖ್ಯಾತಿಯನ್ನು ಗಳಿಸಿದ್ದು ಇವರ ಸಾಹಿತ್ಯ ರಾಜ್ಯ , ರಾಷ್ಟ್ರ, ಅಂತಾರಾಷ್ಟ್ರಮಟ್ಟದಲ್ಲಿ ಮನ್ನಣೆಯನ್ನು ಪಡೆದಿದೆ.ಇವರ ಸಾಹಿತ್ಯ ಸೇವೆ ನಾಡಿಗೆ ಆಗಾಧವಾಗಿದೆ ಸದಾ ಸಮಾಜ ಜಾತಿ ಧರ್ಮ ವರ್ಣ ವ್ಯವಸ್ಥೆಯ ವಿರುದ್ಧ ಬೇಸರಗೊಂಡಿದ್ದರು. ಕುವೆಂಪು, ಪೂರ್ಣಚಂದ್ರತೇಜಸ್ವಿ, ಪಿ.ಲಂಕೇಶ್, ದೇವನೂರು ಮಹಾದೇವ, ಸಿದ್ದಲಿಂಗಯ್ಯ ಅವರ ಬರಹಗಳ ಬಗ್ಗೆ ಅಪಾರವಾದ ಪ್ರೀತಿ ಇತ್ತು. ಇವರು ಸ್ವಾಭಿಮಾನಿ, ಮಾತು ಮೆದುವಾದರೂ ಬಹಳ ಅರ್ಥಗರ್ಭಿತವಾಗಿರುತ್ತಿತ್ತು ಎಂದರು.