ಬೈಕ್ ಸ್ಕಿಡ್ ಆಗಿ ಬಿದ್ದು ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಅಂಬಳನೂರ ಕ್ರಾಸ್ ಹತ್ತಿರ ಸಂಭವಿಸಿದೆ. ತಾಲೂಕಿನ ಕಣಕಾಲ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ, ಪಟ್ಟಣದ ವಿವೇಕಾನಂದ ಗಲ್ಲಿಯ ನಿವಾಸಿ ವಾಸುದೇವ ಹಂಚಾಟೆ (46) ಅಪಘಾತದಲ್ಲಿ ಮೃತಪಟ್ಟಿರುವ ಶಿಕ್ಷಕ.