ಸರ್ಕಾರಿ ಶಾಲೆಯಲ್ಲಿ ಓದಿ ಐಐಟಿ ಸೇರಿದ ದೀಪಕ್‌ಗೆ ರೋಟರಿ ಆರ್ಥಿಕ ನೆರವು
Aug 20 2025, 01:30 AM ISTಸರ್ಕಾರಿ ಶಾಲೆಯಲ್ಲಿ ಓದಿ ಪ್ರತಿಭೆಯಿಂದ ಐಐಟಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿ ದೀಪಕ್ ಅವರಿಗೆ ರೋಟರಿ ಸಂಸ್ಥೆ ಆರ್ಥಿಕ ನೆರವು ನೀಡಿ ಗೌರವಿಸಿದೆ. ದೀಪಕ್ ಅವರ ಬಡತನದ ಹಿನ್ನೆಲೆ ಅರಿತು ರೋಟರಿ ಅಧ್ಯಕ್ಷ ಜ್ಯೋತಿ ಶ್ರೀನಿವಾಸ್, ವಲಯ ಅಧಿಕಾರಿ ಯಶವಂತ್ ಮತ್ತು ತಂಡವು ನೆರವಾಗಲು ಮುಂದಾಯಿತು. ದೀಪಕ್ ತನ್ನ ಬದುಕಿನ ನೋವಿನ ನಡುವೆಯೂ ಸಾಧನೆ ಮಾಡಿದ್ದಾನೆ. ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುವಾಗ ತಾಯಿ ಮೃತಪಟ್ಟರೂ, ಮನೆಯಲ್ಲೇ ಕುಳಿತು ಓದಿ ಉತ್ತಮ ಅಂಕ ಪಡೆದಿದ್ದಾನೆ. ಇವನ ಸಾಧನೆ ಮತ್ತೊಬ್ಬರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.