ಆಲೂರು ಪಟ್ಟಣ ಪಂಚಾಯತ್‌ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಕೈಗೆ

Aug 27 2024, 01:36 AM IST
ಆಲೂರು ಪಟ್ಟಣ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ, ಭಾರಿ ಹೈ ಡ್ರಾಮ ನೆಡೆದು ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದ ತಾಹಿರಾಬೇಗಂ, ಇಬ್ಬರು ಪಕ್ಷೇತರ ಸದಸ್ಯರು, ಇಬ್ಬರು ಬಿಜೆಪಿ ಸದಸ್ಯರು, ಓರ್ವ ಜೆಡಿಎಸ್ ಸದಸ್ಯೆ ಸೇರಿದಂತೆ ಸಂಸದರ 1 ಮತ ಸೇರಿ ಒಟ್ಟು 7 ಮತಗಳನ್ನು ಪಡೆದು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ ಪಿ ರಾಣಿ ಅವರನ್ನು ಪರಾಭವಗೊಳಿಸಿ ಅಧ್ಯಕ್ಷ ಸ್ಥಾನಕ್ಕೇರಿದರು.ಆಲೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಬಹುಮತವಿದ್ದರೂ ಮೈತ್ರಿ ಕೂಟ ಸಮನ್ವಯ ಸಾಧಿಸಲು ವಿಫಲವಾಗದ ಹಿನ್ನೆಲೆಯಲ್ಲಿ, ಮೈತ್ರಿಯ ಒಳ ಜಗಳದಿಂದ ಕೇವಲ ಒಬ್ಬರೇ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಮಾಡಿದ ಆಪರೇಷನ್ ಕಾಂಗ್ರೆಸ್‌ಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ತೀವ್ರ ಮುಖಭಂಗ ಅನುಭವಿಸಬೇಕಾಯಿತು.