ನಗರಸಭೆಯಲ್ಲಿ ಕಾಂಗ್ರೆಸ್ ಅಧಪತ್ಯ ಸಾಧಿಸಿದ ಶಾಸಕ ಶಿವಲಿಂಗೇಗೌಡ
Aug 23 2024, 01:01 AM IST ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಪರ-ವಿರೋಧ ಗೋಜಲಿನಲ್ಲಿ ಎಲ್ಲೂ ಗುರುತಿಸಿಕೊಳ್ಳದೇ ಸೈಲೆಂಟಾಗಿದ್ದುಕೊಂಡೇ ತಮ್ಮ ಆಪ್ತರ ಮೂಲಕ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೊರಗೆ ಏನೇ ನಡೆಯಲಿ, ಒಳಗೆ ಹೀಗೆಯೇ ಆಗಲಿದೆ ಎಂದು ಎಲ್ಲರೂ ಲೆಕ್ಕಾಚಾರ ಮಾಡಿದಂತೆಯೇ ಜೆಡಿಎಸ್ನಿಂದ ಗೆದ್ದಿರುವ ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಎಂ, ಸಮೀವುಲ್ಲಾ ಅವರೇ ಮತ್ತೊಮ್ಮೆ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮನೋಹರ್ ಮೇಸ್ತ್ರಿ ಆಯ್ಕೆಯಾದರು.