ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಸ್ಪಂದಿಸಿ
Feb 14 2025, 12:46 AM ISTಕನ್ನಡಪ್ರಭ ವಾರ್ತೆ ವಿಜಯಪುರ ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಿರಂತರ ಹವಾಮಾನ ವೈಪರೀತ್ಯ ಮುಂತಾದ ಸಮಸ್ಯೆಗಳಿಂದ ಆತನ ಬದುಕು ಸಂಕಷ್ಟದಲ್ಲಿದೆ. ಕಾರಣ ಕೃಷಿ ಪರಿಕರ ಮಾರಾಟಗಾರರು ಕಳಪೆ ಮಟ್ಟದ ಔಷಧ, ಬೀಜ, ಗೊಬ್ಬರಗಳನ್ನು ರೈತರಿಗೆ ನೀಡದೆ, ರೈತರ ಬದುಕು ಹಸನಾಗುವಂತೆ ತಾವೆಲ್ಲರೂ ಶ್ರಮಿಸಬೇಕು ಎಂದು ಧಾರವಾಡದ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.