ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆ
May 10 2024, 01:39 AM ISTಮೈಸೂರು ತಾಲೂಕಿನ ಕೃಷಿ ಇಲಾಖೆ ವತಿಯಿಂದ ತಾಲೂಕಿನ ಜಯಪುರ, ವರುಣ, ಇಲವಾಲ ಹಾಗೂ ಕಸಬ ಹೋಬಳಿಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ, ಪೂರ್ವ ಮುಂಗಾರು ಹಂಗಾಮಿಗೆ ಅನುಗುಣವಾಗಿ ಶೇ.50 ಸಹಾಯಧನದಲ್ಲಿ ಇತರೆ ವರ್ಗದ ರೈತರಿಗೆ ಹಾಗೂ ಶೇ.75 ಸಹಾಯಧನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರುಗಳಿಗೆ ದ್ವಿದಳ ಧಾನ್ಯ ಬಿತ್ತನೆ ಬೀಜಗಳಾದ ಹೆಸರು, ಉದ್ದು ,ಅಲಸಂದೆ ಹಾಗೂ ಏಕದಳ ಧಾನ್ಯ ಮುಸುಕಿನ ಜೋಳ ಮತ್ತು ಹಸಿರಲೆ ಗೊಬ್ಬರ ಬಿತ್ತನೆ ಬೀಜಗಳಾದ ಚಂಬೆ ಹಾಗೂ ಸೆಣಬು ಬೀಜಗಳನ್ನು ವಿತರಿಸಲಾಗುತ್ತಿದೆ.