ಕೃಷಿ ಅಭಿವೃದ್ದಿಯ ಬಗ್ಗೆ ರಾಜ್ಯ, ಕೇಂದ್ರದ ನಿಲುವುಗಳು ಬದಲಾಗಬೇಕಿದೆ: ಮಾಜಿ ಸಿಎಂ ವೀರಪ್ಪ ಮೊಯ್ಲಿ
Feb 10 2024, 01:47 AM ISTಕೃಷಿಕರೇ ರಾಷ್ಟ್ರದ ಬೆನ್ನೆಲುಬು, ಜಗತ್ತಿನ ನಾಗರೀಕತೆಗೆ ಮೊದಲು ಹತ್ತಿ ಬೆಳೆಯನ್ನು ಪರಿಚಯಿಸಿದ್ದು, ಭಾರತ ದೇಶ. ಯಾವುದೇ ರಾಷ್ಟ್ರದ ಶಕ್ತಿಯನ್ನು ಕೃಷಿಯಿಂದ ಅಳೆಯಬಹುದಾಗಿದೆ. 2008ರಲ್ಲಿ ಆರ್ಥಿಕ ಕುಸಿತ ಉಂಟಾದಾಗ ಜಗತ್ತಿನ ಎಲ್ಲ ರಾಷ್ಟ್ರಗಳ ಆರ್ಥಿಕತೆ ಬುಡಮೇಲಾದರೂ ಸಹ ರೈತರ ಶ್ರಮದಿಂದ ಭಾರತ ದೇಶ ಅಂತಹ ಅಘಾತವನ್ನು ಸಹಿಸಿಕೊಂಡು ತಲೆ ಎತ್ತಿ ನಿಲ್ಲಲು ಕಾರಣವಾಗಿದೆ. ಆದ್ದರಿಂದ ರೈತರಿಗೆ ಶಕ್ತಿ ತುಂಬುವಂತಹ ಕಾರ್ಯಕ್ರಮಗಳನ್ನು ಸರ್ಕಾರಗಳು ರೂಪಿಸಬೇಕಿದೆ.