ಬೆಂಚ್ ಪ್ರೆಸ್: ರಕ್ಷಿತ್‌ಗೆ 2 ಚಿನ್ನ, ವಿಶ್ವನಾಥ್‌ಗೆ 2 ಕಂಚಿನ ಪದಕ
Sep 24 2024, 02:02 AM ISTಉಡುಪಿ ಜಿಲ್ಲೆ ಸಾಲಿಗ್ರಾಮದಲ್ಲಿ ಇತ್ತೀಚೆಗೆ ನಡೆದ 2024- 2025ರ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್‌ಪ್ರೆಸ್ ಸ್ಟರ್ಧೆಯಲ್ಲಿ ಶ್ರೀ ಬೀರೇಶ್ವರ ವ್ಯಾಯಾಮ ಶಾಲೆ ಕ್ರೀಡಾಪಟು, ಶ್ರೀ ಕನ್ನಿಕಾ ಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿ ವಿ.ರಕ್ಷಿತ್ ಅವರು 93 ಕೆ.ಜಿ. ವಿಭಾಗದಲ್ಲಿ ಕ್ರಮವಾಗಿ 2 ವಿಭಾಗಗಳ ಸ್ಪರ್ಧೆಯಲ್ಲಿ 182.5 ಕೆ.ಜಿ. ಮತ್ತು 140 ಕೆ.ಜಿ. ಭಾರವನ್ನೆತ್ತಿ 2 ಚಿನ್ನದ ಪದಕ ಗಳಿಸಿದ್ದಾರೆ.