ಸಿಗಂದೂರು ದೇವಿ ದರ್ಶನ ಪಡೆದ ಸುಪ್ರೀಂಕೋರ್ಟ್ ನ್ಯಾ.ಬಿ.ವಿ.ನಾಗರತ್ನಾ
Jun 03 2024, 12:30 AM ISTಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಇಲ್ಲಿನ ಬ್ಯಾಕೋಡು ಮಾರ್ಗದ ಮೂಲಕ ನೇರವಾಗಿ ಸಿಗಂದೂರು ದೇವಸ್ಥಾನಕ್ಕೆ ಆಗಮಿಸಿದರು. ಮಧ್ಯಾಹ್ನ 3 ಗಂಟೆಗೆ ವಿಶೇಷ ಪೂಜೆ ಸಲ್ಲಿಸಿ, ದೇವಿ ದರ್ಶನ ಪಡೆದು ಗಂಧ ಪ್ರಸಾದ ಸ್ವೀಕರಿಸಿದರು. ಈ ವೇಳೆ ದೇವಸ್ಥಾನದ ಧರ್ಮಾಧಿಕಾರಿ ಎಸ್. ರಾಮಪ್ಪ ಅತ್ಮೀಯವಾಗಿ ಸ್ವಾಗತಿಸಿ, ದೇವಸ್ಥಾನದ ಪೂಜಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.