ಯುಜಿಡಿ ಕೊಳಚೆ ನೀರು ಹೊಸಹೊಳಲು ದೊಡ್ಡಕೆರೆ ಸೇರಿ ಮಲೀನ: ಶಾಸಕ ಎಚ್.ಟಿ.ಮಂಜು ಆಕ್ರೋಶ
Dec 27 2024, 12:46 AM ISTಹೊಸಹೊಳಲು ಕೆರೆ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿರುವುದರಿಂದ ಕೆರೆ ಕಲುಷಿತಗೊಳ್ಳುತ್ತಿರುವುದರ ವಿರುದ್ಧ ಕ್ರಮ ವಹಿಸಬೇಕಾದ ಜವಾಬ್ದಾರಿ ನೀರಾವರಿ ಇಲಾಖೆಗೆ ಸೇರಿದೆ. ಆದರೆ, ಸ್ಥಳ ಪರಿಶೀಲನೆಗೆ ಬರುವುವಂತೆ ಸೂಚಿಸಿದರೂ ನೀರಾವರಿ ಇಲಾಖೆ ಎಇಇ ಆನಂದ್ (ಪ್ರಭಾರ ಇಇ) ಸ್ಥಳಕ್ಕೆ ಬರಲಿಲ್ಲ. ಬದಲಾಗಿ ಕಿಕ್ಕೇರಿ ವ್ಯಾಪ್ತಿಯ ಇಂನಿಯರೊಬ್ಬರನ್ನು ಕಾಟಾಚಾರಕ್ಕೆ ಕಳುಹಿಸಿದ್ದರು. ಸ್ಥಳಕ್ಕೆ ಬಾರದೆ ಬೇಜವಾಬ್ದಾರಿ ತೋರಿಸಿದ ಇಂಜಿನಿಯರ್ ಆನಂದ್ ಅವರ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಇವರ ವಿರುದ್ಧ ಕ್ರಮ ವಹಿಸುವಂತೆ ಮೇಲಾಧಿಕಾರಿಗಳಿಗೆ ಸೂಚನೆ ನೀಡಿದರು.