ಶಾಸಕ ಜಿ.ಟಿ.ದೇವೇಗೌಡರು ಮೀಸಲಾತಿ ವಿರೋಧಿಸಿಲ್ಲ: ದಲಿತ ಮುಖಂಡರ ಸ್ಪಷ್ಟನೆ
Mar 02 2024, 01:47 AM ISTವಾಸ್ತವವಾಗಿ ಜಿ.ಟಿ.ದೇವೇಗೌಡರು ಸಹಕಾರ ಕ್ಷೇತ್ರದಲ್ಲಿನ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ. ಈಗಾಗಲೇ ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಇದೆ. ಆದರೆ, ನಾಮ ನಿರ್ದೇಶನದ ಮಾಡುವ ವೇಳೆ ಮೀಸಲಾತಿ ಸರಿಯಲ್ಲ. ಹೊರಗಿನವರನ್ನು ಮೀಸಲಾತಿ ನೆಪದಲ್ಲಿ ತಂದು ಕೂರಿಸಿದರೆ ಸ್ಥಳೀಯ ಆಡಳಿತಗಳಲ್ಲಿ ಅಧಿಕಾರಿಗಳೊಡನೆ ಅವರು ಸೇರಿದರೆ ಅವರದೇ ಪ್ರಾಬಲ್ಯವಾಗುತ್ತದೆ ಎಂಬ ಅಭಿಪ್ರಾಯದಲ್ಲಿ ಅವರು ಮಾತನಾಡಿದ್ದಾರೆ.