ಎಂಜಿ ರೋಡಲ್ಲಿ ನಿಲ್ಲೋ ಕಾರ್ಗಳಿಗೆ ಪಾರ್ಕಿಂಗ್ ಶುಲ್ಕ ಫಿಕ್ಸ್
Jan 11 2024, 01:31 AM ISTನಗರದ ಎಂ.ಜಿ. ರಸ್ತೆಯಲ್ಲಿ ನಿಲ್ಲುವ ಕಾರ್ಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸಬೇಕೆಂಬ ನಗರಸಭೆಯ ಹಲವು ವರ್ಷಗಳ ಪ್ಲಾನ್ ಇದೀಗ ಜಾರಿಗೆ ಬರುತ್ತಿದೆ. ಇದರಿಂದ ಎಂ.ಜಿ. ರಸ್ತೆಯಲ್ಲಿರುವ ವರ್ತಕರಿಗೆ ಹಾಗೂ ಗ್ರಾಹಕರಿಗೆ ಅನುಕೂಲವೋ ಅಥವಾ ಅನಾನುಕೂಲವೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿರುವ ಜತೆಗೆ ಇದೇ ರಸ್ತೆಯಲ್ಲಿ ಪ್ರತಿದಿನ ತಮ್ಮ ಕಾರು ನಿಲ್ಲಿಸಿ ಕಡೂರು, ಬೀರೂರು, ಶಿವಮೊಗ್ಗಕ್ಕೆ ತೆರಳುತ್ತಿದ್ದ ಮಾಲೀಕರಿಗೆ ತಲೆ ಬಿಸಿಯಾಗಿದೆ.