ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಲು ಡಾ. ಸುಂದರೇಗೌಡ ಆಗ್ರಹ
May 15 2024, 01:30 AM ISTಚಿಕ್ಕಮಗಳೂರು, ಖಾಸಗಿ ಶಾಲಾ, ಕಾಲೇಜುಗಳ ಅತಿಯಾದ ಡೊನೇಷನ್, ಶುಲ್ಕ ನಿಯಂತ್ರಿಸಲು ಸರಕಾರ ಶುಲ್ಕ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ. ಕೆ. ಸುಂದರೇಗೌಡ ಆಗ್ರಹಿಸಿದರು.