ಅರ್ಜುನ ಆನೆ ಸಮಾಧಿಗೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸಿ ಚಾಲನೆ ನೀಡಲಿ
Feb 05 2025, 12:31 AM ISTಸಕಲೇಶಪುರ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಅರ್ಜುನ ಆನೆ ಸಮಾಧಿಗೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸದೇ ಮೀರಿ ಉದ್ಘಾಟನೆ ಮಾಡಲು ಮುಂದಾದರೆ ಬೃಹತ್ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನಾವು ಅಭಿವೃದ್ಧಿಗೆ ಕೇಳಿರುವುದು ೫ ಕೋಟಿ, ಅವರು ಕೊಡ್ತೀನಿ ಎಂದಿರುವುದು ೫೦ ಲಕ್ಷ. ಭೂಮಿ ಪೂಜೆ ಮಾಡಬೇಕಾದರೇ ಘೋಷಣೆ ಮಾಡಿದ್ದರು. ಆದರೆ ಇದುವರೆಗೂ ಕೇವಲ ೧೪ ಲಕ್ಷ ರು.ಗಳನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.