ಸಕ್ರೇಬೈಲ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ವೇಳೆ ಆನೆ ಮೇಲಿಂದ ಬಿದ್ದ ಮಾವುತ
Dec 03 2023, 01:00 AM ISTಮಾವುತ ಬೀಳುತ್ತಿದ್ದಂತೆ ಫೊಟೋ ಶೂಟ್‌ನಲ್ಲಿದ್ದ ಯುವಕ- ಯುವತಿ ಗಾಬರಿಯಿಂದ ಓಡಿದ್ದಾರೆ. ಈ ಘಟನೆಯಿಂದ ಬಿಡಾರದಲ್ಲಿ ಕೆಲಹೊತ್ತು ಗೊಂದಲ, ಭಯದ ವಾತಾವರಣ ನಿರ್ಮಾಣವಾಗಿತ್ತು. ತಿಂಗಳಿಗೂ ಹಿಂದೆ ಗರ್ಭಿಣಿ ಆನೆ ಭಾನುಮತಿ ಬಾಲ ತುಂಡಾಗುವಂಥ ಸ್ಥಿತಿಯಲ್ಲಿ ಪೆಟ್ಟುಬಿದ್ದಿತ್ತು. ದಸರಾ ಮೆರವಣಿಗೆ ಹಿಂದಿನ ದಿನ ಮೆರವಣಿಯಲ್ಲಿ ಭಾಗಿ ಆಗಬೇಕಿದ್ದ ಗೀತಾ ಆನೆ ಮರಿಹಾಕಿತ್ತು. ಈ ಎಲ್ಲ ಘಟನೆಗಳಿಂದ ಸಕ್ರೆಬೈಲು ಆನೆ ಬಿಡಾರ ಅಧಿಕಾರಿ-ಸಿಬ್ಬಂದಿ, ವೈದ್ಯರು ಟೀಕೆಗೆ ಗುರಿಯಾಗಿದ್ದರು. ಹೀಗಿರುವಾಗಲೇ ಈಗ ಪ್ರೀ ವೆಡ್ಡಿಂಗ್ ಚಿತ್ರೀಕರಣ ವೇಳೆ ಆನೆ ಮೇಲಿಂದ ಮಾವುತ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಅವಘಡ ಸಂಭವಿಸಿದೆ.