ಹೊಸ ರಥ ಅರ್ಪಿಸಿದ ಮಳಗಲಿ ದಂಪತಿ
May 17 2024, 12:30 AM ISTಘಟಪ್ರಭಾ: ಸ್ಥಳೀಯ ಕಾಳಿಕಾದೇವಿ ದೇವಸ್ಥಾನಕ್ಕೆ ಮಲ್ಲಾಪೂರ ಪಿ.ಜಿ ನಿವಾಸಿ ಸಾಂವಕ್ಕ ಬಸವರಾಜ ಮಳಗಲಿ ದಂಪತಿ ಹೊಸ ರಥ ತಯಾರಿಸಿ ಅರ್ಪಿಸಿದರು. ಹೊಸ ರಥವನ್ನು ಮಲ್ಲಾಪೂರ ಪಿಜಿ ಪುಂಡಲಿಕ ಪತ್ತಾರ ಮನೆ ಬಳಿ ಅಲಂಕರಸಿ ಪೂಜೆ ವಿಧಿ ವಿಧಾನ, ಹೋಮ ಹವನಗಳನ್ನು ವಿಧಿವತ್ತಾಗಿ ಮಾಡಿ, ಭಕ್ತರ ಸಮೂಹ, ಸುಮಂಗಲೆಯರ ಆರತಿಗಳೊಂದಿಗೆ ಎಳೆದು ಕಾಳಿಕಾದೇವರ ಗುಡಿಗೆ ತರಲಾಯಿತು.