ಸಾಲಬಾಧೆಯಿಂದ ಬೇಸತ್ತು ಬಾವಿಗೆ ಹಾರಿ ದಂಪತಿ ಆತ್ಮಹತ್ಯೆ
Dec 13 2024, 12:50 AM ISTಸಾಲಬಾಧೆಯಿಂದ ಬೇಸತ್ತ ರೈತ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಲೂರು ತಾಲೂಕಿನ ಕಟ್ಟೆಗದ್ದೆಯಲ್ಲಿ ಗುರುವಾರ ನಡೆದಿದೆ. ಬ್ಯಾಂಕ್ ಹಾಗೂ ಕೈಸಾಲ ಮಾಡಿಕೊಂಡಿದ್ದರು. ಸತತ ಬೆಳೆನಷ್ಟದಿಂದಾಗಿ ಸಾಲ ತೀರಿಸಲಾಗದೆ ಪರದಾಡುತ್ತಿದ್ದರು. ಸಾಲದ ಹಣ ನೀಡುವಂತೆ ಸಾಲ ಕೊಟ್ಟವರು ಒತ್ತಾಯಿಸುತ್ತಿದ್ದರು. ಇದರಿಂದ ಕಂಗಾಲಾಗಿದ್ದ ಅವರು ಬುಧವಾರ ತಡರಾತ್ರಿ ತಮ್ಮ ಜಮೀನಿನಲ್ಲಿರುವ ತೆರೆದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮದ ನಟೇಶ್ (55), ಚಿನ್ನಮ್ಮ (45) ಮೃತ ದಂಪತಿ.