ಸೈಬರ್ ಖದೀಮರು ತಾವು ಪೊಲೀಸರೆಂದು ವೃದ್ಧ ದಂಪತಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು, ಹಣ ಕೊಡದಿದ್ದರೆ ನಿಮ್ಮ ನಗ್ನ ಚಿತ್ರಗಳನ್ನು ವೃರಲ್ ಮಾಡುವುದಾಗಿ ಬೆದರಿಸಿದ ಪರಿಣಾಮ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.
ಏಕನಾಥ್ ಶಿಂಧೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿರುವ ವಿದೂಷಕ ಕುನಾಲ್ ಕಾಮ್ರಾ ಇದೀಗ ತಮ್ಮ ’ನಯಾ ಭಾರತ್’ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಅವರ ಪತ್ನಿ, ರಾಜ್ಯಸಭೆ ಸಂಸದೆ ಸುಧಾ ಮೂರ್ತಿ ಬಗ್ಗೆ ಲೇವಡಿ ಮಾಡಿದ್ದಾರೆ.
‘ರಾಣಾ ಅಮರ್ ಅಂಬರೀಶ್’ ಇದು ಅಭಿಷೇಕ್, ಅವಿವಾ ದಂಪತಿ ಮಗನ, ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಮೊಮ್ಮಗನ ಹೆಸರು. ಬೆಂಗಳೂರಿನ ಖಾಸಗಿ ಹೊಟೇಲೊಂದರಲ್ಲಿ ಅದ್ದೂರಿಯಾಗಿ ನಡೆದ ನಾಮಕರಣ ಶಾಸ್ತ್ರದಲ್ಲಿ ತಾತ ಅಂಬರೀಶ್ ಅವರ ಮೂಲ ಹೆಸರು ಅಮರ್‌ನಾಥ್ ಅನ್ನೇ ಮೊಮ್ಮಗನಿಗೂ ಇಡಲಾಗಿದೆ.