ಕೃಷ್ಣ ನದಿ ನೀರು ಖಾಲಿ: ರೈತರು ಕಂಗಾಲು
Apr 04 2024, 01:04 AM ISTಅಥಣಿ: ಬಿಸಿಲಿನ ಶಾಖಕ್ಕೆ ನದಿಯಲ್ಲಿನ ನೀರು ದಿನದಿಂದ ದಿನಕ್ಕೆ ಖಾಲಿಯಾಗುತ್ತಿದೆ. ಇದೀಗ ಕೃಷ್ಣ ನದಿಯಲ್ಲಿ ಕೇವಲ 15 ದಿನಗಳಿಗೆ ಮಾತ್ರ ಆಗುವಷ್ಟು ನೀರು ಉಳಿದಿದ್ದು, ನದಿ ಪಾತ್ರದ ಜನರು ಹಾಗೂ ರೈತರು ಕಂಗಾಲಾಗುವಂತೆ ಮಾಡಿದೆ. ಈ ಭಾಗದಲ್ಲಿ ಮೊದಲೇ ನೀರು ಹಾಗೂ ಮೇವಿಗಾಗಿ ರೈತರು ಪರದಾಟ ನಡೆಸುತ್ತಿದ್ದಾರೆ. ಮುಂದೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಸಂಬಂಧ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಥಣಿಯಲ್ಲಿ ರೈತರ ಸಭೆ ಕರೆದಿದ್ದರು. ಆದರೆ, ಸಭೆಯಲ್ಲಿ ಗೊಂದಲವುಂಟಾಗಿದ್ದು, ಅಪೂರ್ಣವಾದಂತಾಗಿದೆ.