ತೆಲಂಗಾಣಕ್ಕೆ ನೀರು ಬಿಟ್ಟಿದ್ದು ಅನ್ಯಾಯ
Mar 12 2025, 12:50 AM ISTಕನ್ನಡಪ್ರಭ ವಾರ್ತೆ ಆಲಮಟ್ಟಿ ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ಸುಮಾರು 10 ಟಿಎಂಸಿ ನೀರನ್ನು ಬಿಟ್ಟಿದ್ದು ಈ ಭಾಗದ ಸಂತ್ರಸ್ತರಿಗೆ ಮಾಡಿದ ಅನ್ಯಾಯ. ಇನ್ನು ಮುಂದೆ ಜಲಾಶಯದಿಂದ ನೀರು ಬಿಡುವುದನ್ನು ನಿಲ್ಲಿಸಿ, ಸಂತ್ರಸ್ತರ ಜಮೀನುಗಳಿಗೆ ಜೂ.15ರವರೆಗೆ ಮುಳವಾಡ ಏತ ನೀರಾವರಿ ಮೂಲಕ ನೀರನ್ನು ಬಿಡಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಆಗ್ರಹಿಸಿದರು.