ಪೊಲೀಸ್ ದೌರ್ಜನ್ಯದ ಆರೋಪ: ಆತ್ಮಹತ್ಯೆ
Aug 14 2025, 01:00 AM ISTಕಳಸ, ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ನನಗೆ ನ್ಯಾಯ ಕೊಡಿಸಿ ಎಂದು ಮರಣ ಪತ್ರ ಬರೆದು ಸಂಸೆಯ ಯುವಕ ನಾಗೇಶ್ (29) ಬುಧವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕಳೆದ ತಿಂಗಳು ಸಂಸೆ ಗ್ರಾಮದಲ್ಲಿ ಪೊಲೀಸ್ ಕಾ ನ್ಸ್‌ಟೆಬಲ್ ಸಿದ್ದೇಶ್ ತನ್ನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆಂದು ದೂರು ನೀಡಿದ್ದ ಪರಿಶಿಷ್ಟ ಜಾತಿಯ ಸಂಸೆ ಗ್ರಾಮದ ಬಸ್ತಿಗದ್ದೆ ನಿವಾಸಿ ನಾಗೇಶ್ ನಾಗೇಶ್ ತನ್ನ ಮನೆಯ ಪಕ್ಕದ ನೆಂಟರ ಮನೆಯಲ್ಲಿ ಬೆಳಿಗ್ಗೆ 8 ಗಂಟೆಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.