ಹತ್ತಿ ಎಲೆ ಕೆಂಪಾಗುವಿಕೆ ತಡೆದಲ್ಲಿ ಗುಣಮಟ್ಟದ ಬೆಳೆ ಸಾಧ್ಯ
Jul 15 2024, 01:48 AM ISTಲಾಭದಾಯಕ ವಾಣಿಜ್ಯ ಬೆಳೆಗಳಲ್ಲಿ ಹತ್ತಿ ಬೆಳೆ ಪ್ರಮುಖವಾದದು. ಬಿಳಿ ಬಂಗಾರ ಎಂದು ಕರೆಯುವ ಹತ್ತಿಯನ್ನು ನೂಲಿನ ರಾಜ ಎಂದೂ ಕರೆಯುತ್ತಾರೆ. ಆದರೆ, ಹತ್ತಿ ಬೆಳೆಗೆ ರೋಗ, ಕೀಟಬಾಧೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಹತ್ತಿ ಗಿಡದ ಎಲೆಗಳು ಕೆಂಪಾಗುವುದನ್ನು ಹೆಚ್ಚು ಕಾಣುತ್ತಿದ್ದೇವೆ. ಆರಂಭಿಕ ಹಂತದಲ್ಲಿಯೇ ಹತೋಟಿ ಕ್ರಮ ಕೈಗೊಂಡರೆ ಗುಣಮಟ್ಟದ ಹತ್ತಿ ಬೆಳೆಯಬಹುದು ಮತ್ತು ಉತ್ಪಾದನಾ ವೆಚ್ಚ ಕಡಿಮೆ ಮಾಡಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.