ತಂದೆ ಜತೆಯಲ್ಲಿದ್ದ ಮಗು ಕ್ಷಣಾರ್ಧದಲ್ಲಿ ಅಪಹರಣ
Aug 01 2024, 12:34 AM IST ಹೊಳೆನರಸೀಪುರ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ತಂದೆಯ ಜತೆ ನಿಂತಿದ್ದ ಸಗೀನಾ (೪) ವರ್ಷದ ಹೆಣ್ಣು ಮಗುವನ್ನು ಕ್ಷಣಾರ್ಧದಲ್ಲಿ ಅಪಹರಿಸಲಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳನೋರ್ವ ಮಗುವಿನ ಕೈಹಿಡಿದು ಕರೆದ್ಯೊಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.