ಸಾಲ ಕೊಟ್ಟಿದ್ದ ಹಣ ಕೇಳಲು ಬಂದ ಮಹಿಳೆ, ಮಗು ಬರ್ಬರ ಹತ್ಯೆ!
Mar 21 2024, 01:03 AM ISTಅಲೆಮಾರಿ ಜನಾಂಗದ ಜಯಮ್ಮ ಊರು ಊರು ಅಲೆದು ಭಿಕ್ಷಾಟನೆ ಮಾಡುತ್ತಿದ್ದರು. ಆದಿಚುಂಚನಗಿರಿಯಲ್ಲಿ ತಿಂಗಳುಗಟ್ಟಲೆ ತಂಗುತ್ತಿದ್ದರು. ಆಗ ತಾಲೂಕಿನ ಆದಿಚುಂಚನಗಿರಿ ಸಮೀಪದ ಚುಂಚನಹಳ್ಳಿಯಲ್ಲಿ ನೆಲೆಸಿದ್ದ ಗುಬ್ಬಿ ತಾಲೂಕಿನ ಸಿ.ಎಸ್.ಪುರದ ಶ್ರೀನಿವಾಸ್ ಪರಿಚಯಲವಾಗಿದೆ. ಜಯಮ್ಮ ತಾನು ಕೂಡಿಟ್ಟಿದ್ದ ಹಣವನ್ನು ಸಾಲವಾಗಿ ಕೊಟ್ಟಿದ್ದರು ಎನ್ನಲಾಗಿದೆ.