ಪಂಚನಹಳ್ಳಿ ರಸ್ತೆ ಅಭಿವೃದ್ಧಿಗೆ 20 ಕೋಟಿ: ಆನಂದ್‌

Jan 18 2024, 02:00 AM IST
ಕ್ಷೇತ್ರದ ಸಿಂಗಟಗೆರೆಯಿಂದ ಪಂಚನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ 20 ಕೋಟಿ ರು. ಮಂಜೂರು ಮಾಡಿಸಿದ್ದು, ಗುಣಮಟ್ಟದ ರಸ್ತೆ ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ ಮಾಡಲಾಗುವುದು ಎಂದ ಶಾಸಕ ಕೆ.ಎಸ್. ಆನಂದ್, ಸಿಂಗಟಗೆರೆ ಹೋಬಳಿಗೆ ಆಗಬೇಕಾದ ಕೆಲಸಗಳು ಮತ್ತಷ್ಟು ಇದ್ದು ಶ್ರೀ ಕಲ್ಲೇಶ್ವರ ಸ್ವಾಮಿ ನೆಲೆಸಿರುವ ಸಿಂಗಟಗೆರೆ ಧಾರ್ಮಿಕ ಕ್ಷೇತ್ರದ ಹೋಬಳಿಯಾಗಿದ್ದು ಈ ಭಾಗಕ್ಕೆ ಹೆಚ್ಚಿನ ಅಭಿವೃದ್ಧಿ ಆಗಬೇಕಿದ್ದು, ಸಿಂಗಟಗೆರೆಯಲ್ಲಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ 15 ಲಕ್ಷ ಬಿಡುಗಡೆ ಮಾಡಿಸಿದ್ದು, 1.25ಕೋಟಿ ವೆಚ್ಚದಲ್ಲಿ ಆಧುನಿಕವಾದ ಬಸ್ ಸ್ಟ್ಯಾಂಡ್ ನಿರ್ಮಾಣಕ್ಕಾಗಿ ಸಾರಿಗೆ ಸಚಿವರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರ ಮಂಜೂರು ಮಾಡಿಸಲಾಗುವುದು ಎಂದರು.