ಸೊರಬ ರಸ್ತೆ ವಿಸ್ತರಣೆ ಬಗ್ಗೆ 15ರಂದು ನಿವಾಸಿಗಳೊಂದಿಗೆ ಚರ್ಚೆ
Jan 07 2024, 01:30 AM ISTನಗರ, ಪಟ್ಟಣಗಳಲ್ಲಿ ರಸ್ತೆ ವಿಸ್ತರಣೆ ಎಂಬುದು ಆಗದಿದ್ದರೆ ಬೆಳೆಯುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಸುರಕ್ಷಿತ ವಾಹನ ಸಂಚಾರ ಅಸಾಧ್ಯವೇ ಸರಿ. ಈ ಕಾರಣದಿಂದ ಸರ್ಕಾರಗಳು ಜನವಿರೋಧ ನಡುವೆಯೂ ಕಾಲಕಾಲಕ್ಕೆ ಯೋಜನೆಗಳ ಜಾರಿಗೊಳಿಸುತ್ತವೆ. ಇದರಿಂದ ಸಾಗರವೂ ಹೊರತಾಗಿಲ್ಲ. ಸಾಗರ ಪಟ್ಟಣದ ಸೊರಬ ರಸ್ತೆ ವಿಸ್ತರಣೆಗೆ ಜ.17 ಅಥವಾ 18ರಂದು ಸ್ಥಳೀಯರ ಜತೆ ಚರ್ಚೆ ನಡೆಸುವುದಾಗಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿದ್ದಾರೆ.