ಅಂತಿಮ ಹಂತದಲ್ಲಿ ರೈಲ್ವೆ ಅಂಡರ್‌ಪಾಸ್ ಕಾಮಗಾರಿ..!
May 28 2024, 01:03 AM ISTಮಳೆ ನೀರು ಅಂಡರ್‌ಪಾಸ್ ಒಳಗೆ ಪ್ರವೇಶಿಸದಂತೆ ಮಹಾವೀರ ವೃತ್ತದ ಆರಂಭದಿಂದ ಅಂಡರ್‌ಪಾಸ್ ಪ್ರವೇಶದ್ವಾರದವರೆಗೆ ಕಬ್ಬಿಣದ ರೂಫ್ ನಿರ್ಮಾಣ ಮಾಡಲಾಗುತ್ತಿದೆ. ಅದರ ಮೇಲೆ ಕಬ್ಬಿಣದ ಶೀಟ್ ಹಾಕಿ ಮಳೆ ನೀರು ಒಳಗೆ ಬಾರದಂತೆ ಜಾಗ್ರತೆ ವಹಿಸಲಾಗಿದೆ. ಒಮ್ಮೆ ಮಳೆ ನೀರು ಅಂಡರ್‌ಪಾಸ್‌ನತ್ತ ಹರಿದುಬಂದರೂ ಸಂಚಾರಕ್ಕೆ ಅಡಚಣೆಯಾಗದಂತೆ ಚಿಕ್ಕದಾಗಿ ನಿರ್ಮಿಸಲಾಗಿರುವ ಕಾಲುವೆ ಮೂಲಕ ಮಳೆ ನೀರು ಸರಾಗವಾಗಿ ಹರಿದು ಚರಂಡಿ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ.