12ರಂದು ಯುಪಿಸಿಎಲ್ ವಿದ್ಯುತ್ ಲೈನ್ ಯೋಜನೆ ವಿರುದ್ಧ ಬೃಹತ್ ಪ್ರತಿಭಟನೆ
Jun 11 2024, 01:30 AM ISTಈ ವಿದ್ಯುತ್ ಲೈನ್ ಯೋಜನೆ ಬಗ್ಗೆ ಈಗಾಗಲೇ ಅನೇಕ ಬಾರಿ ಜಿಲ್ಲಾಧಿಕಾರಿ, ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ಅನೇಕ ಮನವಿಗಳನ್ನು ನೀಡಲಾಗಿದೆ. ಹಕ್ಕೊತ್ತಾಯ ಪ್ರತಿಭಟನೆಗಳನ್ನು ಕೂಡ ಮಾಡಲಾಗಿದೆ. ಆದರೂ ಇವೆಲ್ಲವನ್ನು ಧಿಕ್ಕರಿಸಿ ಯೋಜನೆಯ ಗುತ್ತಿಗೆ ಪಡೆದುಕೊಂಡಿರುವ, ಸ್ಟೆರ್ ಲೈಟ್ ಕಂಪನಿ ಭೂಮಾಲಕರಿಗೆ ಯಾವುದೇ ಪೂರ್ವ ಮಾಹಿತಿ, ನೋಟಿಸ್ ನೀಡದೇ, ಜಿಲ್ಲಾಧಿಕಾರಿಯವರ ಆದೇಶ ಇದೆ ಎಂದು ಬಲತ್ಕಾರವಾಗಿ ಕಾಮಗಾರಿಗೆ ಮುಂದಾಗಿದೆ.