ವಿದ್ಯುತ್ ಕ್ಷೇತ್ರದಲ್ಲಿ ರಾಜ್ಯ ಸ್ವಾವಲಂಬಿ
Sep 11 2024, 01:06 AM ISTಕನ್ನಡಪ್ರಭ ವಾರ್ತೆ ಇಂಡಿ ರಾಜ್ಯ ಇಂದು ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದ್ದು, ಇತರೆ ರಾಜ್ಯಗಳಿಗೆ ವಿದ್ಯುತ್ ಕೊಡುವಷ್ಟರ ಮಟ್ಟಿಗೆ ಸಶಕ್ತವಾಗಿದೆ ಎಂದು ಶಾಸಕ ಹಾಗೂ ರಾಜ್ಯ ಸರ್ಕಾರದ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ತಾಲೂಕಿನ ನಾದ ಗ್ರಾಮದಲ್ಲಿ ನಿರ್ಮಿಸಿದ 110 ಕೆವಿ ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಇಂಧನ ಇಲಾಖೆಯು ಗ್ರಾಮೀಣ, ನಗರಗಳಿಗೆ ವಿದ್ಯುತ್ ಪೊರೈಸುವುದರ ಮೂಲಕ ಯಶಸ್ಸು ಕಂಡಿದೆ.