ಮುಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಶ್ರದ್ಧೆ, ವಿನಯ ಮುಖ್ಯ: ರಾಮಚಂದ್ರ ರಾಜೇ ಅರಸ್
Jan 13 2024, 01:39 AM ISTಸ್ವಾತಂತ್ರ್ಯ ನಂತರದ ಮುಕ್ತ ಶಿಕ್ಷಣ, ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶ್ರದ್ಧೆ, ವಿನಯ, ವಿಶಾಲ ಮನೋಭಾವನೆ ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಹೇಳಿದರು. ನಗರದ ಜೆಎಸ್‌ಎಸ್ ಬಾಲಕೀಯರ ಪ್ರೌಢಶಾಲೆ ಆವರಣದಲ್ಲಿ ನಡೆದ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಿಕ್ಷಣ ಇಂದು ಜಾನ್ಞಾರ್ಜನೆ ಮತ್ತು ಜೀವನಕ್ಕೆ ಬೇಕಾದ ಮೌಲ್ಯಗಳ ಜೊತೆಗೆ ಬದುಕು ಕಟ್ಟಿಕೊಳ್ಳಲು ಅತ್ಯಂತ ಅವಶ್ಯಕವಾಗಿದೆ ಇಂತಹ ಶಿಕ್ಷಣವನ್ನು ಕಲಿಯುವಾಗ ಶ್ರದ್ಧೆ, ವಿನಯ, ವಿಶಾಲ ಮನೋಭಾವನೆ ಹಾಗೂ ಏಕಾಗ್ರತೆ ಅತಿ ಮುಖ್ಯವಾಗಿದೆ, ಇವುಗಳನ್ನು ಅಳವಡಿಸಿಕೊಂಡಾಗ ಉತ್ತಮ ಪ್ರಜೆಯಾಗಿ ಹೊರಹೊಮ್ಮಬಹುದು ಎಂದರು.