ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ, ಉಳ್ಳವರೇ ವಂಚಕರ ಟಾರ್ಗೆಟ್
Sep 15 2024, 01:54 AM ISTಹಾವೇರಿ ಜಿಲ್ಲೆಯಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರಜ್ಞಾವಂತರು ಎನಿಸಿಕೊಂಡವರೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್ ವಂಚಕರು ಹೊಸ ಮಾರ್ಗದಲ್ಲಿ ಬಂದು ಅಮಾಯಕರಿಂದ ಹಣ ದೋಚುತ್ತಿದ್ದಾರೆ. ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್ ವರೆಗಿನ 8 ತಿಂಗಳಲ್ಲಿ ಸೈಬರ್ ವಂಚಕರಿಂದ ಜನರು ₹8.43 ಕೋಟಿ ಕಳೆದುಕೊಂಡಿದ್ದಾರೆ.