ಸೈಬರ್ ಮಾಧ್ಯಮದಿಂದ ಅಭದ್ರತೆ: ಪ್ರೊ. ವೆಂಕಟೇಶ್ವರಲು
Dec 13 2023, 01:00 AM ISTಸಮಾಜದಲ್ಲಿ ಎಲ್ಲವನ್ನೂ ಅಳೆದು ತೂಗಿ ನೋಡಬೇಕು. ಸೈಬರ್ ಮಾಧ್ಯಮವನ್ನು ಸಕಾರಾತ್ಮಕವಾಗಿ ಬಳಕೆಮಾಡುವ ಬದಲು ನಕಾರಾತ್ಮಕವಾಗಿ ಬಳಸಿ ಅಭದ್ರತೆಯನ್ನು ಸೃಷ್ಟಿಸುತ್ತಿರುವ ಸೈಬರ್ ಅಪರಾಧಿಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ತುಮಕೂರು ವಿ.ವಿ. ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ತಿಳಿಸಿದರು.ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗವು ಮಂಗಳವಾರ ಆಯೋಜಿಸಿದ್ದ ಸೈಬರ್ ಫೊರೆನ್ಸಿಕ್ಸ್: ಡಿಜಿಟಲ್ ಡಿಟೆಕ್ಟಿವ್ ವರ್ಕ್ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.