ಕೃಷಿ ಕ್ಷೇತ್ರದಲ್ಲಿ ಹಿನ್ನಡೆಯಿಂದ ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತ: ಡಾ.ನಿರ್ಮಲಾನಂದನಾಥ ಸ್ವಾಮೀಜಿ
Mar 21 2024, 01:07 AM ISTಈ ಹಿಂದೆ ಶೇ.70ರಷ್ಟು ಜನ ಕೃಷಿ ನಂಬಿ ಬದುಕುತ್ತಿದ್ದರೆ, ಇನ್ನುಳಿದ ಶೇ.30 ರಷ್ಟು ಜನರು ಕೈಗಾರಿಗೆ, ಉತ್ಪಾದನೆ ಹಾಗೂ ಇತರ ಸೇವಾ ಕ್ಷೇತ್ರದಲ್ಲಿದ್ದರು. ಇಂದು ಕೃಷಿ ಕ್ಷೇತ್ರದಲ್ಲಿನ ಹಿನ್ನಡೆಯಿಂದ ದೇಶದ ಆರ್ಥಿಕತೆಗೆ ರೈತರ ಕೊಡುಗೆ ಶೇ.15ಕ್ಕೆ ಕುಸಿದಿದೆ. 8 ರಿಂದ 10 ತಿಂಗಳು ಶ್ರಮಿಸುವ ರೈತರಿಗಿಂತ ಕೇವಲ 15 ದಿನ ಶ್ರಮಿಸುವ ಮಧ್ಯವರ್ತಿಗಳಿಗೆ ಕೃಷಿಯಲ್ಲಿ ಲಾಭವಾಗುತ್ತಿದೆ. ಇದಕ್ಕೆ ಮಧ್ಯವರ್ತಿಗಳು ಗುಣಮಟ್ಟವನ್ನು ವೃದ್ಧಿಸಿ ಪ್ಯಾಕಿಂಗ್ ಇತ್ಯಾದಿ ವ್ಯವಸ್ಥೆ ನಿರ್ವಹಿಸುವ ಕಾಯಕದಿಂದಾಗಿ ರೈತರನ್ನು ಲಾಭ ರಹಿತರನ್ನಾಗಿಸಿದೆ.