ಸದ್ಗುರುವಿನ ಕೃಪೆಯಿಂದ ಜೀವನ ಪಾವನ: ಡಾ.ಶಿವಾನಂದ ಭಾರತಿ ಸ್ವಾಮೀಜಿ
Apr 20 2024, 01:05 AM ISTಬೈಲಹೊಂಗಲ: ಸದ್ಗುರುವನ್ನು ಶ್ರದ್ಧೆ, ಭಕ್ತಿಯಿಂದ ಒಲಿಸಿಕೊಳ್ಳುವ ಪ್ರವೃತ್ತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಇದರಿಂದ ಎಲ್ಲವೂ ಪ್ರಾಪ್ತಿಯಾಗುತ್ತದೆ ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು. ಸಮೀಪದ ಮುರಕೀಭಾವಿ ಗ್ರಾಮದ ಸಿದ್ಧಾರೂಢರ ಜಾತ್ರಾ ಮಹೋತ್ಸವ ಅಂಗವಾಗಿ 36ನೇ ವೇದಾಂತ ಪರಿಷತ್ ಯೋಗಿಯನೊಲಿಸಿದೊಡೆ ಇಹಪರ ಸಿದ್ಧಿ ವಿಷಯ ಕುರಿತು ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.