ವಿ.ಶ್ರೀನಿವಾಸ್ ಪ್ರಸಾದ ನಿಧನಕ್ಕೆ ತ್ರಿನೇತ್ರ ಸ್ವಾಮೀಜಿ ಸಂತಾಪ
Apr 30 2024, 02:13 AM ISTಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿಧನ ತುಂಬಲಾರದ ನಷ್ಟವಾಗಿದೆ. ಬಡವರು ಮತ್ತು ಧೀನ ದಲಿತರ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಕಂದಾಯ ಸಚಿವರಾಗಿದ್ದಾಗ ರಾಜ್ಯದ ಅವಿವಾಹಿತ, 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮನಸ್ವಿನಿ ವೇತನ ಎಂಬ ಯೋಜನೆ ಜಾರಿಗೆ ತಂದಿದ್ದು ಹಾಗೂ ರಾಜ್ಯದ ಎಲ್ಲ ಸ್ಮಶಾನಗಳನ್ನು ಸಾರ್ವಜನಿಕ ಸ್ಮಶಾನವೆಂದು ಘೋಷಿಸಿದ ಕೀರ್ತಿ ಸಲ್ಲುತ್ತದೆ.